
ಹಾಸನದಲ್ಲಿ ನಡೆದ ಪ್ರಜಾ ಸೇವೆ ಆಂದೋಲನ ಸಭೆಯಲ್ಲಿ ಸಾರ್ವಜನಿಕರ ದೂರಿನ ಮೇರೆಗೆ, ಬಾರ್ಗಳು ಬೆಳಿಗ್ಗೆ 10:30ಕ್ಕೆ ತೆರೆದು ರಾತ್ರಿ 10:30ಕ್ಕೆ ಬಂದ್ ಆಗಬೇಕೆಂದು ಸಚಿವ ಕೆ.ಎಂ. ಶಿವಲಿಂಗೇಗೌಡ ಆದೇಶಿಸಿದ್ದಾರೆ.
ನಿಯಮ ಉಲ್ಲಂಘಿಸಿ ಸಮಯಕ್ಕಿಂತ ಮುಂಚಿತವಾಗಿ ಬಾರ್ ತೆರೆದರೆ ಅಬಕಾರಿ ಅಧಿಕಾರಿಗಳನ್ನೇ ಸ್ಥಳದಲ್ಲೇ ಅಮಾನತು ಮಾಡುವುದಾಗಿ ಸಚಿವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ಸಾರ್ವಜನಿಕರಿಂದ ಒಟ್ಟು 1,076 ಅರ್ಜಿಗಳು ಸ್ವೀಕೃತವಾಗಿದ್ದು, ಸ್ಥಳದಲ್ಲೇ 62 ಅರ್ಜಿಗಳನ್ನು ಇತ್ಯರ್ಥಪಡಿಸಿ, ಬಾಕಿ ಉಳಿದವುಗಳನ್ನು ಮುಂದಿನ ಎರಡು ತಿಂಗಳ ಒಳಗಾಗಿ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.