Economy
ರೈತನ ದುರಂತ: ಜಮೀನಿನಲ್ಲಿ ಹೂತಿಟ್ಟಿದ್ದ 5 ಲಕ್ಷ ರೂಪಾಯಿ ನಗದು ಗೆದ್ದಲು ಪಾಲು

ರೈತನ ದುರಂತ: ಜಮೀನಿನಲ್ಲಿ ಹೂತಿಟ್ಟಿದ್ದ 5 ಲಕ್ಷ ರೂಪಾಯಿ ನಗದು ಗೆದ್ದಲು ಪಾಲು

oneindia1h
THE BRIEF
1

ರಾಜಸ್ಥಾನದ ಬಾಲೋತ್ರಾ ಜಿಲ್ಲೆಯ ನೇವಿ ಗ್ರಾಮದ ರೈತ ಮಂಗೀಲಾಲ್ ಎಂಬುವವರು ಜಮೀನು ಮಾರಿ ಬಂದ 5 ಲಕ್ಷ ರೂಪಾಯಿ ನಗದನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಹೊಲದಲ್ಲಿ ಹೂತಿಟ್ಟು ಕಳೆದುಕೊಂಡಿದ್ದಾರೆ.

2

ಇತ್ತೀಚೆಗೆ ಮಳೆಗಾಲದ ಉಳುಮೆ ಮಾಡುವಾಗ ಪತ್ತೆಯಾದ ಪ್ಲಾಸ್ಟಿಕ್ ಚೀಲದಲ್ಲಿದ್ದ 5 ಲಕ್ಷ ರೂಪಾಯಿ ಮೌಲ್ಯದ ನೋಟುಗಳನ್ನು ಗೆದ್ದಲುಗಳು ಸಂಪೂರ್ಣವಾಗಿ ತಿಂದು ಪುಡಿಪುಡಿ ಮಾಡಿರುವುದು ಬೆಳಕಿಗೆ ಬಂದಿದೆ.

3

ನೋಟುಗಳ ಸರಣಿ ಸಂಖ್ಯೆ ಮತ್ತು ಸ್ವರೂಪ ಸಂಪೂರ್ಣ ಹಾಳಾಗಿರುವುದರಿಂದ ಇವುಗಳನ್ನು ಬದಲಾಯಿಸಿಕೊಡಲು ಸಾಧ್ಯವಿಲ್ಲ ಎಂದು ಸ್ಥಳೀಯ ಬ್ಯಾಂಕ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.