
ಕಾರ್ಕಳ ತಾಲೂಕಿನ ದುರ್ಗಾ ಫಾಲ್ಸ್‌ನಲ್ಲಿ ಮಳೆಗಾಲದ ರಭಸದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿಗನನ್ನು ಸ್ಥಳೀಯರು ಸಾಹಸಮಯವಾಗಿ ರಕ್ಷಿಸಿದ್ದಾರೆ.
ನೀರಿನ ಅಪಾಯದ ಅರಿವಿಲ್ಲದೆ ಫಾಲ್ಸ್‌ನೊಳಗೆ ಇಳಿದಿದ್ದ ಯುವಕ ಸೆಳೆತಕ್ಕೆ ಸಿಲುಕಿದಾಗ, ಸ್ಥಳೀಯರಾದ ಸುನಿಲ್ ಮತ್ತು ಗಣೇಶ್ ತಕ್ಷಣವೇ ಧಾವಿಸಿ ಆತನನ್ನು ಸುರಕ್ಷಿತವಾಗಿ ದಂಡೆಗೆ ಎಳೆದು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಮಳೆಗಾಲದಲ್ಲಿ ಜಲಪಾತಗಳ ಬಳಿ ತೆರಳದಂತೆ ಅರಣ್ಯ ಇಲಾಖೆ ಮತ್ತು ಪೊಲೀಸರು ಎಚ್ಚರಿಕೆ ನೀಡಿದ್ದರೂ, ಪ್ರವಾಸಿಗರ ನಿರ್ಲಕ್ಷ್ಯ ಮುಂದುವರಿಯುತ್ತಿದ್ದು, ರಕ್ಷಣೆ ಮಾಡಿದ ಸ್ಥಳೀಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.