
ಜಾಂಬಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಲೆಜೆಂಡ್ಸ್ ಲೀಗ್ ಪಂದ್ಯದಲ್ಲಿ ಇಂಡಿಯನ್ ರಾಯಲ್ಸ್ ತಂಡವು ಪಾಕಿಸ್ತಾನ್ ಪ್ಯಾಂಥರ್ಸ್ ವಿರುದ್ಧ 2 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 167 ರನ್ ಗಳಿಸಿದ್ದು, ಗುರಿ ಬೆನ್ನಟ್ಟಿದ ಭಾರತ ತಂಡ 17.4 ಓವರ್ಗಳಲ್ಲಿ 168 ರನ್ ಗಳಿಸಿ ಸತತ ಎರಡನೇ ಗೆಲುವು ದಾಖಲಿಸಿತು.
ಭಾರತದ ಪರ ರಿಷಿ ಧವನ್ 32 ಎಸೆತಗಳಲ್ಲಿ 50 ರನ್ ಮತ್ತು ಸರುಲ್ 29 ಎಸೆತಗಳಲ್ಲಿ 46 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.