
ಬೆಳಗಾವಿ ಉತ್ತರ ಮತ್ತು ಬೀದರ್ನ ಭಾಲ್ಕಿ ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರ ಹೆಸರನ್ನು ಅಳಿಸಿಹಾಕಲು ನಮೂನೆ-7ರಡಿ 600ಕ್ಕೂ ಹೆಚ್ಚು ನಕಲಿ ಅರ್ಜಿಗಳನ್ನು ಅಕ್ರಮವಾಗಿ ಸಲ್ಲಿಸಲಾಗಿದೆ.
ಬೆಳಗಾವಿ ಉತ್ತರ ಕ್ಷೇತ್ರದ ಮತಗಟ್ಟೆಗಳಲ್ಲಿ ಬೈಕ್ನಲ್ಲಿ ಬಂದಿಳಿದ ಇಬ್ಬರು ಅಪರಿಚಿತರು ನೂರಾರು ಪೂರ್ವಮುದ್ರಿತ ಅರ್ಜಿಗಳನ್ನು ಬಿಎಲ್ಒಗಳಿಗೆ ನೀಡಿದ್ದು, ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಅರ್ಜಿಗಳಲ್ಲಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಸುಳ್ಳು ಕಾರಣಗಳನ್ನು ನಮೂದಿಸಲಾಗಿದ್ದು, ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರು ಅಕ್ರಮ ಸಾಬೀತಾದರೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.