
ಹೊರ್ಮುಜ್ ಜಲಸಂಧಿಯ ಮೂಲಕ ಸಾಗುತ್ತಿದ್ದ ಅಬುಧಾಬಿಯ ಅಡ್‌ನಾಕ್ ಕಂಪನಿಯ ಎರಡು ತೈಲ ಹಡಗುಗಳ ಮೇಲೆ ಇರಾನ್ ಡ್ರೋನ್‌ಗಳ ಮೂಲಕ ದಾಳಿ ನಡೆಸಿದೆ ಎಂದು ಯುಎಇ ವಿದೇಶಾಂಗ ಸಚಿವಾಲಯ ಆರೋಪಿಸಿದೆ.
ಗುರುವಾರ ಸಂಜೆ ನಡೆದ ಈ ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲವಾದರೂ, ಇದು ಜಾಗತಿಕ ಇಂಧನ ಭದ್ರತೆಗೆ ಬೆದರಿಕೆಯಾಗಿದೆ ಎಂದು ಯುಎಇ ತಿಳಿಸಿದೆ.
ಗಾಜಾ ಕದನ ವಿರಾಮ ಮಾತುಕತೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಲಹೆಗಾರ ಜಾರೆಡ್ ಕಶ್ನರ್ ನೇತೃತ್ವದ ತಂಡ ಭಾನುವಾರ ಇಸ್ರೇಲ್‌ಗೆ ಭೇಟಿ ನೀಡಲಿದೆ.