
ಕರ್ನಾಟಕ ಸರ್ಕಾರದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪರಿಷ್ಕರಣೆ ಕಾರ್ಯಕ್ಕೆ ಇಂಧನ ಇಲಾಖೆ ಸೆಪ್ಟೆಂಬರ್ 30ರವರೆಗೆ ಒಂದು ತಿಂಗಳು ಗಡುವು ವಿಸ್ತರಿಸಿದೆ.
ಜುಲೈ 1ರಿಂದ ಆರಂಭವಾದ ಮನೆ ಮನೆ ಸರ್ವೆ ಕಾರ್ಯದಲ್ಲಿ ಇದುವರೆಗೆ ಶೇಕಡಾ 70ರಷ್ಟು ಪೂರ್ಣಗೊಂಡಿದ್ದು, ಉಳಿದ ಶೇಕಡಾ 30ರಷ್ಟು ಕೆಲಸ ಬಾಕಿ ಇದೆ.
ಗ್ರಾಹಕರಿಂದ ಸರಿಯಾದ ಪ್ರತಿಕ್ರಿಯೆ ಸಿಗದ ಕಾರಣ ಬೆಸ್ಕಾಂ ಸೇರಿದಂತೆ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ ಸರ್ವೆ ಅವಧಿಯನ್ನು ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.