
ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ 5 ದಿನ ಬಾಕಿ ಇದ್ದು, ಆಗಸ್ಟ್ 21ರಂದು ಆರಂಭವಾದ ಅಡ್ವಾನ್ಸ್ ಬುಕಿಂಗ್‌ನಲ್ಲಿ ಸಾವಿರಾರು ಟಿಕೆಟ್‌ಗಳು ಮಾರಾಟವಾಗಿವೆ.
ಆಗಸ್ಟ್ 26ರ ಬಿಡುಗಡೆಗಾಗಿ ಕರ್ನಾಟಕ ಸೇರಿದಂತೆ ವಿವಿಧೆಡೆ ಅಭಿಮಾನಿಗಳು ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಚಿತ್ರಮಂದಿರಗಳ ಮುಂದೆ ಬೃಹತ್ ಕಟೌಟ್‌ಗಳನ್ನು ನಿರ್ಮಿಸಲಾಗುತ್ತಿದೆ.
ಆನಂದ್ ಆರ್ಟ್ಸ್ ತಂಡವು ಯಶ್ ಅವರ ಈ ಚಿತ್ರಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಕಟೌಟ್‌ಗಳನ್ನು ಸಿದ್ಧಪಡಿಸುತ್ತಿದ್ದು, ರಾಜ್ಯಾದ್ಯಂತ ಸಿನಿಮಾದ ಹವಾ ಜೋರಾಗಿದೆ.