
ಯಾದಗಿರಿ ಜಿಲ್ಲಾ ಕೇಂದ್ರದಿಂದ ಕೇವಲ 25 ಕಿಲೋಮೀಟರ್ ದೂರದಲ್ಲಿರುವ ಮಲಕಪ್ಪನಹಳ್ಳಿ ಗ್ರಾಮಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳಾದರೂ ಬಸ್ ಸೌಲಭ್ಯವಿಲ್ಲ.
ಸಾರಿಗೆ ಸೌಲಭ್ಯದ ಕೊರತೆಯಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯ 3 ರಿಂದ 5 ಕಿಲೋಮೀಟರ್ ನಡೆದು ಹೋಗುವ ಅನಿವಾರ್ಯತೆಯಲ್ಲಿದ್ದಾರೆ.
ರೈಲ್ವೆ ಟ್ರ್ಯಾಕ್ ದಾಟಿ ಹೋಗುವಾಗ ಹೆಣ್ಣುಮಕ್ಕಳು ಭಯಪಡುತ್ತಿದ್ದು, ಈ ಸಮಸ್ಯೆಯಿಂದಾಗಿ ಹಲವು ಪೋಷಕರು ಐದನೇ ತರಗತಿಯ ನಂತರ ಮಕ್ಕಳ ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದಾರೆ.