
ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ 78 ವರ್ಷದ ಶೇಖ್ ಹಸೀನಾ ಅವರು ದೇಶಕ್ಕೆ ಮರಳಿದ ತಕ್ಷಣ ಅವರನ್ನು ಬಂಧಿಸಲಾಗುವುದು ಎಂದು ಕಾನೂನು ಸಚಿವ ಎಂ. ಅಸಾದುಜ್ಜಮಾನ್ ಗುರುವಾರ ತಿಳಿಸಿದ್ದಾರೆ.
ತಮ್ಮ ಜೀವಕ್ಕೆ ಕುತ್ತು ಇದ್ದರೂ ಡಿಸೆಂಬರ್ ವೇಳೆಗೆ ದೇಶಕ್ಕೆ ಮರಳಲು ನಿರ್ಧರಿಸಿದ್ದೇನೆ ಎಂದು ಹಸೀನಾ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಹಸೀನಾ ಅವರು ನ್ಯಾಯಾಲಯಕ್ಕೆ ಶರಣಾಗಲು ಬಯಸಿದರೂ, ಅದಕ್ಕೂ ಮೊದಲೇ ಅವರನ್ನು ಬಂಧಿಸುವುದಾಗಿ ಸಚಿವರು ಸ್ಪಷ್ಟಪಡಿಸಿದ್ದು, ಕಾನೂನು ಉಲ್ಲಂಘನೆಗೆ ಅವಕಾಶವಿಲ್ಲ ಎಂದಿದ್ದಾರೆ.