
ಬೆಂಗಳೂರಿನ ಕಂಬೀಪುರದಲ್ಲಿ ಆದಿಚುಂಚನಗಿರಿ ಮಠಕ್ಕೆ ಸೇರಿದ 120 ಕೋಟಿ ರೂಪಾಯಿ ಮೌಲ್ಯದ 6 ಎಕರೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಯತ್ನಿಸಿದ ಪ್ರಕರಣದ ಕಿಂಗ್ಪಿನ್ ನರೇಶ್ ಗೌಡ ವಿಚಾರಣೆಗೆ ಹಾಜರಾಗಿದ್ದಾನೆ.
ಈ ಅಕ್ರಮದಲ್ಲಿ ಇಬ್ಬರು ಡೆಪ್ಯುಟಿ ತಹಶೀಲ್ದಾರ್ಗಳು ಮತ್ತು ಇಬ್ಬರು ವಿಲೇಜ್ ಅಕೌಂಟೆಂಟ್ಗಳು ಸೇರಿದಂತೆ ಒಟ್ಟು 6 ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದು, ಈವರೆಗೆ 17 ಜನರನ್ನು ಬಂಧಿಸಲಾಗಿದೆ.
ಕೆಂಗೇರಿ ಪೊಲೀಸರು ನರೇಶ್ ಗೌಡನನ್ನು ಒಂದು ದಿನ ವಿಚಾರಣೆ ನಡೆಸಿದ್ದು, ಮತ್ತಷ್ಟು ತನಿಖೆಗಾಗಿ ಆತನಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.