
ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಬೆಳಗಾವಿಯಿಂದ ಧರ್ಮಸ್ಥಳ, ಬೆಂಗಳೂರು ಮತ್ತು ಮೈಸೂರಿಗೆ 3 ಹೊಸ ಪಲ್ಲಕ್ಕಿ ನಾನ್-ಎಸಿ ಸ್ಲೀಪರ್ ಬಸ್ ಸೇವೆಗಳನ್ನು ಆರಂಭಿಸಿದೆ.
ಪ್ರತಿ ಮಾರ್ಗಕ್ಕೆ ಟಿಕೆಟ್ ದರವನ್ನು 1,150 ರೂಪಾಯಿ ಎಂದು ನಿಗದಿಪಡಿಸಲಾಗಿದ್ದು, ಪ್ರಯಾಣಿಕರು ksrtc.in ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು 77609 91635 ಅಥವಾ 77609 91625 ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ.