
ಗಾಜಿಯಾಬಾದ್ನ ಹಿಂದನ್ ವಾಯುನೆಲೆಯಲ್ಲಿ ನಡೆದ 94ನೇ ವಾಯುಪಡೆ ದಿನಾಚರಣೆಯಲ್ಲಿ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಅವರು ಮಾತನಾಡಿದ್ದಾರೆ.
ದೇಶದ ಸಾರ್ವಭೌಮತ್ವ ಮತ್ತು ಹಿತಾಸಕ್ತಿಯನ್ನು ರಕ್ಷಿಸುವಲ್ಲಿ ವಾಯುಶಕ್ತಿಯೇ ಪ್ರಾಥಮಿಕ ಅಸ್ತ್ರವಾಗಿದೆ ಎಂಬುದನ್ನು ಪ್ರಸ್ತುತ ಜಾಗತಿಕ ಸಂಘರ್ಷಗಳು ಸಾಬೀತುಪಡಿಸಿವೆ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 31 ರಂದು ನಿವೃತ್ತರಾಗಲಿರುವ ಅವರು, ಮಹಾನ್ ಪಡೆಯ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ್ದು ತನ್ನ ಜೀವನದ ಅತಿದೊಡ್ಡ ಸೌಭಾಗ್ಯ ಎಂದು ಸ್ಮರಿಸಿದ್ದಾರೆ.