ಬೆಂಗಳೂರಿನ ಯಶವಂತಪುರದ ಮಹಿಳೆಯೊಬ್ಬರು ಫೇಸ್‌ಬುಕ್‌ನಲ್ಲಿ ಪರಿಚಯವಾದ ಲಂಡನ್ ಉದ್ಯೋಗಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬನಿಗೆ 1.7 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ಆರೋಪಿಯು ದುಬಾರಿ ಉಡುಗೊರೆಗಳನ್ನು ಕಳುಹಿಸುವುದಾಗಿ ನಂಬಿಸಿ, ಕಸ್ಟಮ್ಸ್ ಕ್ಲಿಯರೆನ್ಸ್ ಹೆಸರಿನಲ್ಲಿ ಮಹಿಳೆಯಿಂದ ಆರ್ ಟಿ ಜಿ ಎಸ್ ಮೂಲಕ 40 ಲಕ್ಷ ರೂ. ಹಾಗೂ ಉಳಿದ ಹಣವನ್ನು ನಗದಾಗಿ ಪಡೆದಿದ್ದಾನೆ.
ವಂಚಕನ ಫೋನ್ ಸ್ವಿಚ್ ಆಫ್ ಆದ ನಂತರ ಮೋಸ ಹೋಗಿರುವುದು ಅರಿವಾದ ಮಹಿಳೆ, ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.