Indian Politics
2019ರಿಂದ ಕರ್ನಾಟಕಕ್ಕೆ 4.60 ಲಕ್ಷ ಕೋಟಿ ರೂ. ಬಿಡುಗಡೆ

2019ರಿಂದ ಕರ್ನಾಟಕಕ್ಕೆ 4.60 ಲಕ್ಷ ಕೋಟಿ ರೂ. ಬಿಡುಗಡೆ

prajavani1h
THE BRIEF
1

2019-20ರಿಂದ 2025-26ರ ಅವಧಿಯಲ್ಲಿ ತೆರಿಗೆ ಪಾಲು ಮತ್ತು ಸಹಾಯ ಅನುದಾನದ ರೂಪದಲ್ಲಿ ಕರ್ನಾಟಕಕ್ಕೆ ಒಟ್ಟು 4.60 ಲಕ್ಷ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

2

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಲೋಕಸಭೆಯಲ್ಲಿ ನೀಡಿದ ಮಾಹಿತಿಯಂತೆ, ತೆರಿಗೆ ಪಾಲಿನ ರೂಪದಲ್ಲಿ 2,59,421 ಕೋಟಿ ಮತ್ತು ಸಹಾಯ ಅನುದಾನದ ರೂಪದಲ್ಲಿ 1,80,539 ಕೋಟಿ ನೀಡಲಾಗಿದೆ.

3

2020-21ರಿಂದ ಬಂಡವಾಳ ಹೂಡಿಕೆಗಾಗಿ ವಿಶೇಷ ಅನುದಾನದ ರೂಪದಲ್ಲಿ ಹೆಚ್ಚುವರಿಯಾಗಿ 20,160 ಕೋಟಿ ರೂಪಾಯಿಗಳನ್ನು ಕರ್ನಾಟಕಕ್ಕೆ ಒದಗಿಸಲಾಗಿದೆ ಎಂದು ಸಚಿವರು ಸಂಸತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ.