
2025–26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಲಬುರಗಿ ಜಿಲ್ಲೆಯ 3,00,952 ರೈತರಿಗೆ ಒಟ್ಟು ₹585.72 ಕೋಟಿ ಬೆಳೆ ವಿಮೆ ಪರಿಹಾರ ಮಂಜೂರಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈಗಾಗಲೇ 2,87,696 ರೈತರಿಗೆ ₹243.52 ಕೋಟಿ ಮೊದಲ ಕಂತು ಜಮೆಯಾಗಿದ್ದು, ಎರಡನೇ ಕಂತಿನ ₹54 ಕೋಟಿ ಬಿಡುಗಡೆಯಾಗಿದೆ ಮತ್ತು ಉಳಿದ ₹67 ಕೋಟಿ ಶೀಘ್ರವೇ ಜಮೆಯಾಗಲಿದೆ.
ಅತಿವೃಷ್ಟಿಯಿಂದ 3.24 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 3,26,183 ರೈತರಿಗೆ ₹498.73 ಕೋಟಿ ಬೆಳೆ ಹಾನಿ ಪರಿಹಾರವನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲಾಗಿದೆ.