
ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ವಾರ್ವಿಕ್‌ಷೇರ್ ತಂಡದ ಪರ ಆಡಿದ ಯುವ ಸ್ಪಿನ್ನರ್ ಮಾನವ್ ಸುತಾರ್, ಹ್ಯಾಂಪ್‌ಶೈರ್ ವಿರುದ್ಧದ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 7 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ಮಾನವ್ ಸುತಾರ್ ಅವರ ಈ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ವಾರ್ವಿಕ್‌ಷೇರ್ ತಂಡವು ಹ್ಯಾಂಪ್‌ಶೈರ್ ವಿರುದ್ಧ ಇನ್ನಿಂಗ್ಸ್ ಗೆಲುವು ಸಾಧಿಸಲು ಸಾಧ್ಯವಾಗಿದೆ.
ಈ ಗೆಲುವಿನೊಂದಿಗೆ ವಾರ್ವಿಕ್‌ಷೇರ್ ತಂಡವು ಕೌಂಟಿ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದು, ಸುತಾರ್ ಅವರ ಪ್ರದರ್ಶನ ಇಂಗ್ಲೆಂಡ್‌ನಲ್ಲಿ ಗಮನ ಸೆಳೆದಿದೆ.