
ಭಾರತೀಯ ಕ್ರಿಕೆಟ್‌ನ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗುಸನ್ ಅಸಾಧಾರಣ ಪ್ರತಿಭೆ ಎಂದು ಬಣ್ಣಿಸಿದ್ದಾರೆ.
ಅಕ್ಟೋಬರ್ 22ರಿಂದ ಆರಂಭವಾಗಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಗಾಗಿ ವೈಭವ್ ಸೂರ್ಯವಂಶಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಪ್ರವಾಸಿ ಆಟಗಾರರಿಗೆ ನ್ಯೂಜಿಲೆಂಡ್ ವಾತಾವರಣ ಮತ್ತು ಸಣ್ಣ ಮೈದಾನಗಳು ಸವಾಲೊಡ್ಡಲಿದ್ದು, ವೈಭವ್ ಸವಾಲನ್ನು ಎದುರಿಸಲು ತಾನು ಕಾತರನಾಗಿರುವುದಾಗಿ ಫರ್ಗುಸನ್ ತಿಳಿಸಿದ್ದಾರೆ.