
ತಮಿಳುನಾಡು ವಿಧಾನಸಭೆಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳ ಅಕ್ರಮದ ಕುರಿತು ನಡೆದ ಗದ್ದಲದ ವೇಳೆ, ಹಿಂದಿನ ಡಿಎಂಕೆ ಸರ್ಕಾರದ ಭ್ರಷ್ಟಾಚಾರದ ಕಡತಗಳನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸುವುದಾಗಿ ಸಿಎಂ ಸಿ. ಜೋಸೆಫ್ ವಿಜಯ್ ಎಚ್ಚರಿಸಿದ್ದಾರೆ.
ಡಿಎಂಕೆ ನಾಯಕ ಇ.ವಿ. ವೇಲು ಅವರು ಸಿಎಂ ಕಚೇರಿ ಸ್ಥಳಾಂತರದ 5.54 ಕೋಟಿ ರೂ. ವೆಚ್ಚದ ಟೆಂಡರ್ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ ನಂತರ ಈ ವಾಗ್ವಾದ ನಡೆದಿದೆ.
ತನ್ನ ಮೇಜಿನ ಮೇಲೆ ಎರಡು ಭ್ರಷ್ಟಾಚಾರದ ಕಡತಗಳಿವೆ ಎಂದು ಹೇಳಿರುವ ಸಿಎಂ ವಿಜಯ್, ಈಗಲೇ ಅವುಗಳನ್ನು ಹೊರಹಾಕುವಂತೆ ತನ್ನನ್ನು ಕೆಣಕಬೇಡಿ ಎಂದು ಡಿಎಂಕೆ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.