ಕಲಬುರಗಿಯ ಕೆನರಾ ಬ್ಯಾಂಕ್‌ನ ಸ್ಟೇಶನ್ ಬಜಾರ್ ಶಾಖೆಯ ಗ್ರಾಹಕ ಸಿದ್ದಯ್ಯ ನಂದಿಕೋಲ ಅವರ ಖಾತೆಯಿಂದ ಅಕ್ರಮವಾಗಿ ₹4.84 ಲಕ್ಷ ಕಡಿತಗೊಂಡಿತ್ತು.
ಗ್ರಾಹಕರು ಮಾಹಿತಿ ನೀಡಿದರೂ ಹಣ ವರ್ಗಾವಣೆಯನ್ನು ತಡೆಯಲು ಬ್ಯಾಂಕ್ ವಿಫಲವಾಗಿದೆ ಎಂದು ಕಲಬುರಗಿ ಜಿಲ್ಲಾ ಗ್ರಾಹಕರ ಆಯೋಗ ಅಭಿಪ್ರಾಯಪಟ್ಟಿದೆ.
ಹಣವನ್ನು ವಾರ್ಷಿಕ ಶೇ 6ರ ಬಡ್ಡಿ, ಸೇವಾ ಲೋಪಕ್ಕಾಗಿ ₹15 ಸಾವಿರ ಹಾಗೂ ವ್ಯಾಜ್ಯ ವೆಚ್ಚವಾಗಿ ₹5 ಸಾವಿರ ಸೇರಿ ಒಟ್ಟು ₹5.04 ಲಕ್ಷ ಪಾವತಿಸಲು ಆಯೋಗ ಆದೇಶಿಸಿದೆ.