
‘ದೇವಣ್ಣ ದಳಂ’ ಹೆಸರಿನಲ್ಲಿ ಬೆದರಿಕೆ ಪತ್ರ ಬರೆದು ಹಣಕ್ಕೆ ಬೇಡಿಕೆಯಿಟ್ಟು ಆತಂಕ ಸೃಷ್ಟಿಸಿದ್ದ ನಕಲಿ ನಕ್ಸಲ್ ವೆಂಕಟೇಶ್ ಪತ್ತೆಗಾಗಿ ತುಮಕೂರು ಜಿಲ್ಲೆಯ ಪಾವಗಡದಲ್ಲಿ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದಾರೆ.
ಎಎಸ್‌ಪಿ ಗೋಪಾಲ್ ಹಾಗೂ ಡಿವೈಎಸ್‌ಪಿ ಮಂಜುನಾಥ್ ನೇತೃತ್ವದಲ್ಲಿ 120 ಮಂದಿ ಪೊಲೀಸರ 5 ತಂಡಗಳು ಡ್ರೋನ್ ಕ್ಯಾಮೆರಾಗಳನ್ನು ಬಳಸಿ ದಟ್ಟ ಬೆಟ್ಟಗುಡ್ಡಗಳಲ್ಲಿ ಶೋಧ ನಡೆಸುತ್ತಿವೆ.
ಮೋಟಾರ್‌ನಲ್ಲಿ ಕಚ್ಚಾ ಬಾಂಬ್ ಸ್ಫೋಟ ಹಾಗೂ ಬೆದರಿಕೆ ಪತ್ರದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಪತ್ನಿ ಸೇರಿದಂತೆ ಐವರನ್ನು ಈಗಾಗಲೇ ಬಂಧಿಸಲಾಗಿದೆ.