
ಗಣೇಶ ಮೆರವಣಿಗೆ ವೇಳೆ ಮಸೀದಿಗಳ ಮುಂದೆ ನಿರ್ಬಂಧ ವಿಧಿಸಿರುವ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಹೇಳಿಕೆಯನ್ನು ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರವಾಗಿ ಖಂಡಿಸಿದ್ದಾರೆ.
ಇನ್ನೊಮ್ಮೆ ಅಂತಹ ಮಾತು ಬಂದರೆ ನಿಮ್ಮ ಠಾಣೆಗೆ ಬಂದು ನುಗ್ಗುತ್ತೇನೆ ಎಂದು ಇನ್ಸ್‌ಪೆಕ್ಟರ್ ಧನಂಜಯ್ ಅವರಿಗೆ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದಾರೆ.
ಮೊಹರಂ ಅಥವಾ ಈದ್ ಮೆರವಣಿಗೆಗಳ ಸಂದರ್ಭದಲ್ಲಿ ದೇವಸ್ಥಾನಗಳ ಮುಂದೆ ಇಂತಹ ಭದ್ರತೆ ಇರುವುದಿಲ್ಲ ಎಂದು ಪ್ರಶ್ನಿಸಿರುವ ಅವರು, ಈ ನಿರ್ಬಂಧಗಳು ಏಕಪಕ್ಷೀಯವಾಗಿವೆ ಎಂದು ಟೀಕಿಸಿದ್ದಾರೆ.