
ಕೋಲಾರ ತಾಲೂಕಿನ ಹೊಳಲಿ ಗ್ರಾಮದ ಬಳಿ 70 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ 12 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಉತ್ಪಾದನಾ ಘಟಕವು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಕಳೆದ 10 ತಿಂಗಳಿಂದ ಪರೀಕ್ಷಾರ್ಥ ಕಾರ್ಯದಲ್ಲಿರುವ ಈ ಯೋಜನೆಯಿಂದ ಒಕ್ಕೂಟಕ್ಕೆ ಬರೋಬ್ಬರಿ 10.5 ಕೋಟಿ ರೂಪಾಯಿ ಉಳಿತಾಯವಾಗಿದೆ.
ಒಕ್ಕೂಟದ ಸ್ವಂತ ಬಳಕೆಗೆ ವಿದ್ಯುತ್ ಪೂರೈಸುವುದರ ಜೊತೆಗೆ, ಹೆಚ್ಚುವರಿ ವಿದ್ಯುತ್ ಅನ್ನು ಬಲ್ಕ್ ಮಿಲ್ಕ್ ಸೆಂಟರ್‌ಗಳಿಗೆ ನೀಡಿ ಮಾರಾಟದ ಮೂಲಕವೂ ಆದಾಯ ಗಳಿಸಲಾಗುತ್ತಿದೆ.