
ರಾಜ್ಕೋಟ್ನಲ್ಲಿ ನಡೆಯುತ್ತಿರುವ ಅಂಡರ್-19 ಟೆಸ್ಟ್ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟರ್ ಲಕ್ಷ್ಯ ರಾಯ್ಚಂದಾನಿ ಅಜೇಯ ದ್ವಿಶತಕ ದಾಖಲಿಸಿದ್ದಾರೆ.
247 ಎಸೆತಗಳಲ್ಲಿ ದ್ವಿಶತಕ ಪೂರೈಸಿದ ಲಕ್ಷ್ಯ, ಭಾರತ ತಂಡವನ್ನು 400 ರನ್ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಭಾರತದಲ್ಲಿ 19 ವರ್ಷದೊಳಗಿನವರ ಟೆಸ್ಟ್ ಪಂದ್ಯವೊಂದರಲ್ಲಿ ದ್ವಿಶತಕ ಬಾರಿಸಿದ ಮೊದಲ ಆಟಗಾರ ಎಂಬ ಸಾಧನೆಯನ್ನು ಲಕ್ಷ್ಯ ಮಾಡಿದ್ದಾರೆ.