
ಸೀರಿಯಲ್ ನಟನಾಗಿದ್ದ ದಿನಗಳಲ್ಲಿ ಮಾಧ್ಯಮಗಳು ಕಡೆಗಣಿಸಿದ್ದನ್ನು ನೆನಪಿಸಿಕೊಂಡ ಯಶ್ ಅವರ ಹಳೆಯ ಸಂದರ್ಶನದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಜಿಎಫ್ ಸರಣಿಯ ಮೂಲಕ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿರುವ ಯಶ್, ಇದೀಗ 'ಟಾಕ್ಸಿಕ್' ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ರಜತ್ ಶರ್ಮಾ ಅವರ 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್, ತಮ್ಮ ಕಠಿಣ ಪರಿಶ್ರಮದಿಂದ ಇಂದು ಭಾರತೀಯ ಚಿತ್ರರಂಗದ ಪ್ರಭಾವಿ ನಟರಾಗಿ ಹೊರಹೊಮ್ಮಿದ್ದಾರೆ.