
ಬಿಗ್ ಬಾಸ್ ಕನ್ನಡ ಮನೆಯ ಕಿಚನ್ ಏರಿಯಾದಲ್ಲಿ ಸ್ಪರ್ಧಿಗಳಾದ ಸೌಂದರ್ಯಾ ಶೆಟ್ಟಿ ಮತ್ತು ಸಂಗೀತಾ ನಡುವೆ ಕೆಲಸದ ಹಂಚಿಕೆ ಕುರಿತು ಚರ್ಚೆ ನಡೆದಿದೆ.
ಮನೆಗೆಲಸಗಳನ್ನು ಹೆಚ್ಚಾಗಿ ಮಹಿಳೆಯರಿಗೆ ಮಾತ್ರ ವಹಿಸಲಾಗುತ್ತಿದ್ದು ಗಂಡುಮಕ್ಕಳು ಕೆಲಸ ಮಾಡುತ್ತಿಲ್ಲ ಎಂದು ಸೌಂದರ್ಯಾ ನೇರವಾಗಿ ಪ್ರಶ್ನಿಸಿದ್ದಾರೆ.
ಮಧ್ಯರಾತ್ರಿ ಕಾವ್ಯಾ ಬಳಿ ಅಡುಗೆ ಮಾಡಿಸಿದ್ದಾರೆ ಎಂದು ಸಂಗೀತಾ ಈ ವೇಳೆ ಆರೋಪಿಸಿದ್ದಾರೆ.