
'ಪ್ರೇಮದ ಊರಲಿ' ಸಿನಿಮಾವು ಸೂಪರ್ ಹಿಟ್ ಆಗಿ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಿದೆ.
ಸಿನಿಮಾದ ಯಶಸ್ಸಿನ ನಂತರ ಚಿತ್ರಕ್ಕೆ 2ನೇ ಭಾಗ ಬರುತ್ತದೆಯೇ ಎಂಬ ಕುತೂಹಲಕ್ಕೆ ನಿರ್ದೇಶಕ ಮನೋಜ್ ಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಒಂದು ಕಥೆಗೆ ನ್ಯಾಯ ಒದಗಿಸುವುದು ಮುಖ್ಯವೆಂದು ತಿಳಿಸಿರುವ ಅವರು, 'ಪ್ರೇಮದ ಊರಲಿ ಪಾರ್ಟ್ 2' ಮಾಡುವ ಯಾವುದೇ ಆಲೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.