
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ 155ಕ್ಕೂ ಹೆಚ್ಚು ಏರಿಕೆಯಾಗಿದ್ದು, ಸಚಿವ ರಾಮಲಿಂಗಾ ರೆಡ್ಡಿ ಅವರು ವನ್ಯಜೀವಿಗಳ ರಕ್ಷಣಾ ಕಾರ್ಯಗಳನ್ನು ಪರಿಶೀಲಿಸಿದ್ದಾರೆ.
ಅರಣ್ಯ ರಕ್ಷಣೆಗಾಗಿ ಥರ್ಮಲ್ ಡ್ರೋನ್‌ಗಳು, ಜಿಪಿಎಸ್ ರೇಡಿಯೋ ಕಾಲರ್‌ಗಳ ಬಳಕೆಯನ್ನು ಪರಿಚಯಿಸಲಾಗಿದ್ದು, ಡ್ರೋನ್ ಪೈಲಟ್ ಕ್ಷೇತ್ರ ಕೈಪಿಡಿಯನ್ನು ಬಿಡುಗಡೆ ಮಾಡಲಾಗಿದೆ.
ಕಾಡುಪ್ರಾಣಿಗಳು ನಾಡಿಗೆ ಬರುವುದನ್ನು ತಡೆಯಲು ರೈಲ್ವೆ ಬ್ಯಾರಿಕೇಡ್ ಹಾಗೂ ಸೋಲಾರ್ ಫೆನ್ಸಿಂಗ್ ನಿರ್ವಹಣೆ ಜೊತೆಗೆ ಅರಣ್ಯ ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.