
ಬಾಲಿವುಡ್ ನಿರ್ದೇಶಕ ಸಂಜಯ್ ಗುಪ್ತಾ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಅವರ ಅಂತಿಮ ದರ್ಶನಕ್ಕೆ ತೆರಳಿದ್ದ ಹಿರಿಯ ನಿರ್ಮಾಪಕ ರಾಕೇಶ್ ರೋಷನ್ ಅಲ್ಲಿ ನಗುತ್ತಾ ಮಾತನಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಂಜಯ್ ಗುಪ್ತಾ ಅವರ ಅಗಲಿಕೆಯಿಂದ ಮತ್ತೊಬ್ಬ ನಿರ್ದೇಶಕ ಮಿಲಾಪ್ ಝವೇರಿ ಕಣ್ಣೀರಿಟ್ಟು ದುಃಖಿಸುತ್ತಿರುವಾಗಲೇ ರಾಕೇಶ್ ರೋಷನ್ ಪಕ್ಕದಲ್ಲೇ ನಿಂತು ನಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಅಸಂವೇದನಾಶೀಲ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಕಠಿಣವಾಗಿ ಟ್ರೋಲ್ ಮಾಡುತ್ತಿದ್ದಾರೆ.