
ಬೆಂಗಳೂರಿನಲ್ಲಿ ಅಪಘಾತ ತಡೆಗಟ್ಟಲು ಬಿಜಿಎಸ್, ಪೀಣ್ಯ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಐದು ಪ್ರಮುಖ ಫ್ಲೈಓವರ್ಗಳ ಮೇಲೆ ನಿರ್ದಿಷ್ಟ ವಾಹನಗಳ ಸಂಚಾರಕ್ಕೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.
ಸೆಪ್ಟೆಂಬರ್ 4ರಿಂದ ಬಿಜಿಎಸ್, ಏರ್ಪೋರ್ಟ್ ಮತ್ತು ಡಬಲ್ ಡೆಕ್ಕರ್ ಫ್ಲೈಓವರ್ಗಳಲ್ಲಿ, ಹಾಗೂ ಸೆಪ್ಟೆಂಬರ್ 11ರಿಂದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ನಲ್ಲಿ ಹೊಸ ನಿಯಮಗಳು ಜಾರಿಯಾಗಲಿವೆ.
ಎಲೆಕ್ಟ್ರಾನಿಕ್ ಸಿಟಿ ಮತ್ತು ಏರ್ಪೋರ್ಟ್ ಫ್ಲೈಓವರ್ಗಳಲ್ಲಿ ಬೈಕ್ಗಳ ಸಂಚಾರಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗಿದ್ದು, ಸರಕು ಸಾಗಣೆ ವಾಹನಗಳಿಗೂ ಸಮಯದ ನಿರ್ಬಂಧ ವಿಧಿಸಲಾಗಿದೆ.