
ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಮಟನ್ ಶಾಪ್‌ವೊಂದರಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಜುನೈದ್ ಪಾಷಾ ಮತ್ತು ರಿಜ್ವಾನ್ ಬೇಗ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾ ಪ್ರಜೆಯಿಂದ ಡ್ರಗ್ಸ್ ತರಿಸಿ ಮಾರಾಟ ಮಾಡಲಾಗುತ್ತಿದ್ದು, ದಾಳಿ ನಡೆಸಿದ ಪೊಲೀಸರು 10 ಲಕ್ಷದ 60 ಸಾವಿರ ರೂಪಾಯಿ ಮೌಲ್ಯದ 106 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಿಂದ ಎರಡು ಮೊಬೈಲ್ ಫೋನ್‌ಗಳು, ನಗದು ಹಾಗೂ ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದ್ದು, ಸಣ್ಣ ಅಂಗಡಿಗಳನ್ನೂ ಡ್ರಗ್ಸ್ ದಂಧೆಗೆ ಬಳಸುತ್ತಿರುವುದು ಆತಂಕ ಮೂಡಿಸಿದೆ.