Indian Politics
ಐಆರ್‌ಸಿಟಿಸಿ ಹಗರಣ: ಲಾಲು ಯಾದವ್ ಕುಟುಂಬದ ವಿರುದ್ಧ ದೋಷಾರೋಪಣೆಗೆ ಕೋರ್ಟ್ ಅನುಮತಿ

ಐಆರ್‌ಸಿಟಿಸಿ ಹಗರಣ: ಲಾಲು ಯಾದವ್ ಕುಟುಂಬದ ವಿರುದ್ಧ ದೋಷಾರೋಪಣೆಗೆ ಕೋರ್ಟ್ ಅನುಮತಿ

tv9kannada1h
THE BRIEF
1

ಐಆರ್‌ಸಿಟಿಸಿ ಹೋಟೆಲ್ ಗುತ್ತಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್, ರಾಬ್ರಿ ದೇವಿ ಮತ್ತು ತೇಜಸ್ವಿ ಯಾದವ್ ಸೇರಿದಂತೆ 9 ಮಂದಿ ವಿರುದ್ಧ ದೋಷಾರೋಪಣೆ ಮಾಡಲು ದೆಹಲಿ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.

2

2004ರಿಂದ 2009ರ ಅವಧಿಯಲ್ಲಿ ರೈಲ್ವೆ ಸಚಿವರಾಗಿದ್ದ ಲಾಲು ಯಾದವ್ ಅಧಿಕಾರ ದುರ್ಬಳಕೆ ಮಾಡಿಕೊಂಡು, ಸುಜಾತಾ ಹೋಟೆಲ್ಸ್‌ಗೆ ಗುತ್ತಿಗೆ ನೀಡಿ ಪ್ರತಿಯಾಗಿ ಪಾಟ್ನಾದಲ್ಲಿ ಕೋಟ್ಯಂತರ ರೂ. ಮೌಲ್ಯದ ಜಮೀನು ಪಡೆದಿದ್ದಾರೆ ಎಂಬ ಆರೋಪವಿದೆ.

3

ಪ್ರಕರಣದ ವಿಚಾರಣೆಯು ಅಕ್ಟೋಬರ್ 3ರಂದು ನಡೆಯಲಿದ್ದು, ಅಂದು ಲಾಲು ಕುಟುಂಬದವರು ನ್ಯಾಯಾಲಯಕ್ಕೆ ಹಾಜರಾಗಿ ಅಧಿಕೃತವಾಗಿ ದೋಷಾರೋಪಣೆಯನ್ನು ಸ್ವೀಕರಿಸಬೇಕಿದೆ ಎಂದು ನ್ಯಾಯಾಧೀಶ ವಿಶಾಲ್ ಗೋಗ್ನೆ ಆದೇಶಿಸಿದ್ದಾರೆ.