
ಉತ್ತರ ಪ್ರದೇಶದ ಜೌನ್ಪುರ ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿ ಪ್ರಭಾತ್ ಕುಮಾರ್ ಯಾದವ್ ನೀಟ್ ಯುಜಿ ಪರೀಕ್ಷೆಯಲ್ಲಿ 627 ಅಂಕಗಳನ್ನು ಗಳಿಸಿ ಎಂಬಿಬಿಎಸ್ ಸೀಟ್ ಗಿಟ್ಟಿಸಿಕೊಂಡಿದ್ದಾರೆ.
ಲಖನೌದ ಪ್ರತಿಷ್ಠಿತ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ (KGMU) ಅಖಿಲ ಭಾರತ ಮಟ್ಟದಲ್ಲಿ 3,864ನೇ ರ್ಯಾಂಕ್ ಪಡೆದು ಈ ಸಾಧನೆ ಮಾಡಿದ್ದಾರೆ.
ಪ್ರಭಾತ್ ಅವರ ತಂದೆ ಮಹೇಂದ್ರ ಕುಮಾರ್ ಯಾದವ್ ಕಳೆದ 20 ವರ್ಷಗಳಿಂದ ಮುಂಬೈನಲ್ಲಿ ಆಟೋ ರಿಕ್ಷಾ ಚಾಲಕರಾಗಿ ಕೆಲಸ ಮಾಡಿಕೊಂಡು ಮಗನ ವಿದ್ಯಾಭ್ಯಾಸಕ್ಕೆ ಆಸರೆಯಾಗಿದ್ದಾರೆ.