
ಐಪಿಎಲ್ 2027ರ ಸೀಸನ್‌ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಆಟಗಾರರ ವಿನಿಮಯದ ಕುರಿತು ಚರ್ಚೆಗಳು ನಡೆಯುತ್ತಿವೆ.
ಎಸ್‌ಆರ್‌ಹೆಚ್ ತಂಡವು ಆರ್‌ಸಿಬಿಯ ಫಿನಿಷರ್ ಜಿತೇಶ್ ಶರ್ಮಾ ಅವರನ್ನು ಪಡೆಯಲು ಆಸಕ್ತಿ ತೋರಿದ್ದು, ಪ್ರತಿಯಾಗಿ ಆರ್‌ಸಿಬಿ ಇಶಾನ್ ಕಿಶನ್ ಅವರನ್ನು ಕೇಳಿದೆ ಎಂದು ವರದಿಯಾಗಿದೆ.
ಇಶಾನ್ ಕಿಶನ್ ಅವರನ್ನು ಭವಿಷ್ಯದ ನಾಯಕನನ್ನಾಗಿ ನೋಡುತ್ತಿರುವ ಎಸ್‌ಆರ್‌ಹೆಚ್ ಮ್ಯಾನೇಜ್‌ಮೆಂಟ್, ಈ ಮೆಗಾ ಡೀಲ್ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಇನ್ನೂ ಮೀನಮೇಷ ಎಣಿಸುತ್ತಿದೆ.