ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಜುಲೈ 25ರಂದು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಧರ್ಮೇಂದ್ರ ಪ್ರಧಾನ್ಗೆ ಜುಲೈ 27ರಂದು ಸಂಸತ್ತಿನಲ್ಲಿ ಬಿಜೆಪಿ ಮತ್ತು ಎನ್ಡಿಎ ಸಂಸದರು ಅದ್ದೂರಿ ಸ್ವಾಗತ ನೀಡಿದರು.
ಒಡಿಶಾದ ಸಂಸದರಾಗಿರುವ ಪ್ರಧಾನ್ರನ್ನು ಸಂಸತ್ ಭವನದಲ್ಲಿ ಮೈತ್ರಿಕೂಟದ ಸಂಸದರು
ಧರ್ಮೇಂದ್ರ ಪ್ರಧಾನ್ ಜಿಂದಾಬಾದ್
ಘೋಷಣೆಗಳೊಂದಿಗೆ ಸ್ವಾಗತಿಸಿದರು.
ರಾಜೀನಾಮೆ ಬಳಿಕ ಮಾತನಾಡಿದ ಪ್ರಧಾನ್, ಭಾರತದ ಯುವಶಕ್ತಿಯು ಗೊಂದಲದಲ್ಲಿ ಸಿಲುಕಿಕೊಳ್ಳಲು ಬಿಡುವುದಿಲ್ಲ ಎಂದು ಹೇಳಿ, ಪ್ರಧಾನಿ ಮೋದಿ ಘೋಷಿಸಿರುವ ಪರೀಕ್ಷಾ ಸುಧಾರಣೆಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.