
ಬಾಂಗ್ಲಾದೇಶದ ರಂಗ್ಪುರದಲ್ಲಿ ನಿವೃತ್ತ ಶಿಕ್ಷಕ ಗಣಪತಿ ಚಕ್ರವರ್ತಿ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಸಿದ್ಧಾರ್ಥ ದಾಸ್ (19) ಮತ್ತು ಮುಗ್ಧಾ ದಾಸ್ (23) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು 'ಯಾಬಾ' ಮಾದಕ ದ್ರವ್ಯ ಸೇವಿಸಲು ಮನೆಯ ಛಾವಣಿ ಹತ್ತಿ, ಗಣಪತಿ (65), ಪತ್ನಿ ಪ್ರೀತಿಲತಾ (50), ಮಗಳು ಅಗಾಮಿ (23) ಹಾಗೂ 12 ವರ್ಷದ ಬಾಲಕ ಪ್ರಿಯಂ ಅವರನ್ನು ಕೊಂದಿದ್ದಾರೆ.
ಕೊಲೆಯ ನಂತರ ಆರೋಪಿಗಳು ಮನೆಯಲ್ಲೇ ಸ್ನಾನ ಮಾಡಿ, ಫ್ರಿಡ್ಜ್ನಲ್ಲಿದ್ದ ಆಹಾರ ಸೇವಿಸಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಸ್ಥಳದಲ್ಲಿ ಸಿಕ್ಕ ಖರ್ಜೂರದ ಬೀಜಗಳ ಡಿಎನ್ಎ ಪರೀಕ್ಷೆ ನಡೆಸಲಾಗುತ್ತಿದೆ.