
ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿಗಳ ಪುತ್ರ ಆಯುಷ್ ನಾಯಕನಾಗಿ ನಟಿಸುತ್ತಿರುವ ಮೊದಲ ಸಿನಿಮಾದ ಶೇ. 50ರಷ್ಟು ಚಿತ್ರೀಕರಣ ಮುಗಿದಿದೆ.
ಆದರೆ ಪ್ರಿಯಾಂಕಾ ಉಪೇಂದ್ರ ಅವರು ಇದ್ದಕ್ಕಿದ್ದಂತೆ ನಿರ್ದೇಶಕ ಪುರುಷೋತ್ತಮ್ ಹಾಗೂ ಹಿರಿಯ ಕ್ಯಾಮೆರಾಮ್ಯಾನ್ ವೇಣು ಅವರನ್ನು ಚಿತ್ರದಿಂದ ಹೊರಹಾಕಿದ್ದಾರೆ.
ಈ ಬೆಳವಣಿಗೆಯಿಂದ ನೊಂದಿರುವ ನಿರ್ದೇಶಕ ಪುರುಷೋತ್ತಮ್ ಅವರು ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.