
ಇಟಲಿಯ ಟಸ್ಕನಿ ಪ್ರದೇಶದಲ್ಲಿರುವ ಪ್ರತಿಷ್ಠಿತ ಮಾರ್ಚೆಸಿ ಆಂಟಿನೋರಿ ವೈನರಿಯಲ್ಲಿ ಸುಮಾರು 48 ಕೋಟಿ ರೂಪಾಯಿ ಮೌಲ್ಯದ 30,000 ಪ್ರೀಮಿಯಂ ವೈನ್ ಬಾಟಲಿಗಳನ್ನು ಕಳ್ಳರು ದೋಚಿದ್ದಾರೆ.
ಅಕ್ಟೋಬರ್ 3 ಮತ್ತು 4ರ ರಾತ್ರಿ ಕನಿಷ್ಠ ಏಳು ಮಂದಿಯ ಮುಖವಾಡ ಧರಿಸಿದ ತಂಡವು ಭದ್ರತಾ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿ, ಕಂಪನಿಯ ಫೋರ್ಕ್ ಲಿಫ್ಟ್ಗಳನ್ನು ಬಳಸಿ ಎರಡು ಟ್ರಕ್ಗಳಿಗೆ ವೈನ್ ಲೋಡ್ ಮಾಡಿದೆ.
ಸೋಲೈಯಾ, ಟಿಗ್ನಾನೆಲ್ಲೊ ಹಾಗೂ ಗ್ವಾಡೊ ಅಲ್ ಟಾಸೊ ಬ್ರಾಂಡ್ಗಳ ಈ ಬಾಟಲಿಗಳು ಕಳುವಾಗಿದ್ದು, ಇಟಲಿ ಪೊಲೀಸರು ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.