
ಗದಗ ನಗರದ ಪಿಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾದ ಆಕಾಶ್ ಪಾಟೀಲ್ ಹಾಗೂ ದಾವಲ್ ಸಾಬ್ ರೂಪಿಸಿದ ಎರಡು ವಿಭಿನ್ನ ಆವಿಷ್ಕಾರಗಳು ಕೇಂದ್ರ ಸರ್ಕಾರದ ಇನ್‌ಸ್ಪೈರ್ ಅವಾರ್ಡ್‌ಗೆ ಆಯ್ಕೆಯಾಗಿವೆ.
ವಿದ್ಯಾರ್ಥಿಗಳು ಬಿಸಿಯೂಟದಲ್ಲಿ ಹಾನಿಕಾರಕ ಅಂಶಗಳನ್ನು ಸೆನ್ಸರ್ ಮೂಲಕ ಪತ್ತೆಹಚ್ಚುವ 'ಮಿಡ್ ಡೇ ಮೀಲ್ ಸೇಫ್ಟಿ ಚೆಕ್ ಫಾರ್ ಸ್ಕೂಲ್' ಮಾದರಿಯನ್ನು ಸಿದ್ಧಪಡಿಸಿದ್ದಾರೆ.
ಜೊತೆಗೆ ಶಾಲಾ ಆವರಣದ ಬಳಿ ವಾಹನಗಳ ವೇಗ ನಿಯಂತ್ರಿಸಲು ಜನರನ್ನು ಗುರುತಿಸಿ ಸಿಗ್ನಲ್ ನೀಡುವ 'ಸ್ಕೂಲ್ ಝೋನ್ ಆಟೋಮ್ಯಾಟಿಕ್ ಸ್ಪೀಡ್ ಬ್ರೇಕರ್' ಮಾದರಿಯನ್ನು ರೂಪಿಸಿದ್ದಾರೆ.