
ಪ್ರಾದೇಶಿಕ ಚಿತ್ರಗಳಿಗೆ ಹೋಲಿಸಿದರೆ ಹಿಂದಿ ಭಾಷೆಯಲ್ಲಿ ಸಿನಿಮಾ ನಿರ್ಮಿಸುವುದು ಅತ್ಯಂತ ಕಷ್ಟಕರವಾದ ಕೆಲಸ ಎಂದು ನಟ ಅಜಯ್ ದೇವ್‌ಗನ್ ತಿಳಿಸಿದ್ದಾರೆ.
ಭಾರತದಲ್ಲಿ ಪ್ರತಿ 80-90 ಕಿಲೋಮೀಟರ್‌ಗಳಿಗೆ ಭಾಷೆ ಹಾಗೂ ಸಂಸ್ಕೃತಿ ಬದಲಾಗುವುದರಿಂದ ನಿರ್ದಿಷ್ಟ ಪ್ರೇಕ್ಷಕರನ್ನು ಗುರಿಯಾಗಿಸುವುದು ಕಷ್ಟ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಒಟಿಟಿ ಮತ್ತು ಡಿಜಿಟಲ್ ಮಾಧ್ಯಮಗಳಿಂದ ಪ್ರೇಕ್ಷಕರಿಗೆ ವಿಪುಲ ಆಯ್ಕೆಗಳಿದ್ದು, ಕಂಟೆಂಟ್ ಉತ್ತಮವಾಗಿದ್ದರೆ ಮಾತ್ರ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಗೆಲುವು ಸಾಧಿಸುತ್ತವೆ ಎಂದಿದ್ದಾರೆ.