
ಮದುವೆ ಸೀಸನ್ ಹಾಗೂ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆ ಪ್ರಭಾವದಿಂದ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೊಮ್ಮೆ ಭಾರಿ ಏರಿಕೆ ದಾಖಲಾಗಿದೆ.
ಒಂದೇ ದಿನದ ಅಂತರದಲ್ಲಿ ಅಂದರೆ ನಿನ್ನೆಗೆ ಹೋಲಿಸಿದರೆ 22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ ₹105 ಏರಿಕೆಯಾಗಿ ₹13,815 ತಲುಪಿದ್ದರೆ, 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ ಗ್ರಾಂಗೆ ₹114 ಹೆಚ್ಚಾಗಿ ₹15,071 ತಲುಪಿದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 1 ಕೆಜಿ ಬೆಳ್ಳಿ ಬೆಲೆ ₹2,34,900 ರಂತೆ ಮುಂದುವರಿದಿದ್ದು, ಜಿಎಸ್‌ಟಿ ಹಾಗೂ ಮೇಕಿಂಗ್ ಚಾರ್ಜ್‌ಗಳು ಪ್ರತ್ಯೇಕ್ಷವಾಗಿ ಅನ್ವಯಿಸಲಿವೆ.