
ಭಾರತದ ಅಗ್ರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಚೀನಾ ಮಾಸ್ಟರ್ಸ್ ಸೂಪರ್ 750 ಟೂರ್ನಿಯಲ್ಲಿ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಭಾರತೀಯ ಜೋಡಿಯು ಮಲೇಷ್ಯಾದ ನೂರ್ ಮೊಹಮ್ಮದ್ ಅಜ್ರಿನ್ ಅಯೂಬ್ ಮತ್ತು ತಾನ್ ವೀ ಕಿಯಾಂಗ್ ವಿರುದ್ಧ 21-15, 18-21, 21-11 ಅಂತರದಲ್ಲಿ 65 ನಿಮಿಷಗಳ ಹೋರಾಟದ ಬಳಿಕ ಜಯ ಸಾಧಿಸಿತು.
ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಾತ್ವಿಕ್-ಚಿರಾಗ್ ಜೋಡಿಯು ಆತಿಥೇಯ ಚೀನಾದ ಹೆ ಜಿ ಟಿಂಗ್ ಮತ್ತು ರೇನ್ ಕ್ಸಿಯಾಂಗ್ ಯು ಅವರನ್ನು ಎದುರಿಸಲಿದೆ.