
ಬೆಂಗಳೂರಿನಲ್ಲಿ ಮನೆ ನಿರ್ಮಾಣದ ಪ್ಲಾನ್ ಅನುಮೋದನೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸುಧಾರಿತ 'ನಂಬಿಕೆ ನಕ್ಷೆ 2.0' ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.
ಈ ಹಿಂದೆ 2ರಿಂದ 3 ತಿಂಗಳು ತೆಗೆದುಕೊಳ್ಳುತ್ತಿದ್ದ ಪ್ಲಾನ್ ಅನುಮೋದನೆ ಸಮಯವು ಇನ್ನು ಮುಂದೆ ಕೇವಲ 15ರಿಂದ 30 ನಿಮಿಷಗಳಿಗೆ ಇಳಿಕೆಯಾಗಲಿದೆ.
ನಗರ ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಸೆಪ್ಟೆಂಬರ್ 19ರಂದು ಈ ಹೊಸ ವ್ಯವಸ್ಥೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.