
ಭಾರತದಲ್ಲಿ ಪ್ರತಿವರ್ಷ ಸ್ತನಕ್ಯಾನ್ಸರ್ನ 2 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ಕರ್ನಾಟಕದಲ್ಲೇ 35,000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ.
ಶೇ 50ರಷ್ಟು ಪ್ರಕರಣಗಳು ತಡವಾಗಿ ಪತ್ತೆಯಾಗುತ್ತಿರುವುದು ಸಾವಿನ ಪ್ರಮಾಣ ಹೆಚ್ಚಲು ಮುಖ್ಯ ಕಾರಣವಾಗಿದ್ದು, ಆರಂಭಿಕ ಹಂತದಲ್ಲಿ ಪತ್ತೆಯಾದರೆ ಬದುಕುಳಿಯುವ ಸಾಧ್ಯತೆ ಶೇ 95ರಷ್ಟಿರುತ್ತದೆ.
ವಾರಕ್ಕೆ ಕನಿಷ್ಠ 150 ನಿಮಿಷ ವ್ಯಾಯಾಮ ಮಾಡುವುದು ಮತ್ತು ಆರೋಗ್ಯಕರ ತೂಕ ಕಾಯ್ದುಕೊಳ್ಳುವುದು ಅಪಾಯವನ್ನು ಶೇ 10 ರಿಂದ 20ರಷ್ಟು ತಗ್ಗಿಸುತ್ತದೆ.