ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯು ಕಲಬುರಗಿ-ಮೈಸೂರು ಮತ್ತು ಕಲಬುರಗಿ-ಶಿವಮೊಗ್ಗ ಮಾರ್ಗಗಳಲ್ಲಿ 4 ಹೊಸ ಸ್ಲೀಪರ್ ಬಸ್‌ಗಳ ಸೇವೆಯನ್ನು ಆರಂಭಿಸಿದೆ.
ಕಲಬುರಗಿ-ಮೈಸೂರು ನಾನ್-ಎಸಿ ಸ್ಲೀಪರ್ ದರ 1,262 ರೂ. ಮತ್ತು ಕಲಬುರಗಿ-ಶಿವಮೊಗ್ಗ ಎಸಿ ಸ್ಲೀಪರ್ ದರ 1,195 ರೂ. ಎಂದು ನಿಗದಿಪಡಿಸಲಾಗಿದೆ.
ಸಂಸ್ಥೆಯು ಮುಂದಿನ 3 ತಿಂಗಳಲ್ಲಿ 45 ಕೋಟಿ ರೂ. ವೆಚ್ಚದಲ್ಲಿ 120 ಹೊಸ ಬಸ್‌ಗಳನ್ನು ಸೇರ್ಪಡೆಗೊಳಿಸಲಿದ್ದು, ಶೀಘ್ರದಲ್ಲೇ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗೂ ಚಿಂತನೆ ನಡೆಸಿದೆ.