Indian Politics
ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸುವಂತೆ INDIA ಒಕ್ಕೂಟ ಆಗ್ರಹ

ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸುವಂತೆ INDIA ಒಕ್ಕೂಟ ಆಗ್ರಹ

prajavani1h
THE BRIEF
1

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ INDIA ಒಕ್ಕೂಟ ಶನಿವಾರ ದೆಹಲಿಯಲ್ಲಿ ಸಾರ್ವಜನಿಕ ಮಹಾಭಿಯೋಗ ನಡೆಸಿದೆ.

2

ಸಿಇಸಿ ಅವರನ್ನು ತಕ್ಷಣ ವಜಾಗೊಳಿಸುವುದು, 2023ರ ಚುನಾವಣಾಧಿಕಾರಿ ನೇಮಕ ಕಾನೂನು ರದ್ದು ಮತ್ತು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಿಲ್ಲಿಸಬೇಕು ಎಂಬ ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

3

ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಿಂದ ಸುಮಾರು 13.3 ಕೋಟಿ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.