
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಅರಣ್ಯ ವ್ಯಾಪ್ತಿಯಲ್ಲಿ ಮಳೆ ಕೊರತೆ ಮತ್ತು ಉಷ್ಣಾಂಶ ಏರಿಕೆಯಿಂದ ಕಾಫಿ ಇಳುವರಿ ತೀವ್ರವಾಗಿ ಕುಸಿದಿದೆ.
ಸುಮಾರು 600 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿರುವ ಕಾಫಿ ಕಾಯಿಗಳು ಹಣ್ಣಾಗುವ ಮುನ್ನವೇ ಗಿಡದಲ್ಲೇ ಒಣಗಿ ಕಪ್ಪು ಬಣ್ಣಕ್ಕೆ ತಿರುಗುತ್ತಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.
ಗುಣಮಟ್ಟ ಕಳೆದುಕೊಂಡ ಈ ಕಾಯಿಗಳಿಂದ 'ಗುಂಡ್ಲ ಕಾಫಿ' ತಯಾರಿಸುವ ಅನಿವಾರ್ಯತೆ ಎದುರಾಗಿದ್ದು, ಗಿರಿವಾಸಿಗಳನ್ನು ರೈತರೆಂದು ಗುರುತಿಸಿ ಸರ್ಕಾರ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಗಿದೆ.