
ಮಲೇಷ್ಯಾದ ಪೆನಾಂಗ್‌ನಲ್ಲಿ ನಡೆದ ಏಷ್ಯಾ ಪೆಸಿಫಿಕ್ ಡೆಫ್ ಮಲ್ಟಿ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್ 2026ರಲ್ಲಿ ಮೈಸೂರಿನ ಕ್ರೀಡಾಪಟು ಎಂ. ರಿಷಿತಾ ಕಂಚಿನ ಪದಕ ಗೆದ್ದಿದ್ದಾರೆ.
ರಿಷಿತಾ ಅವರು 100 ಮತ್ತು 200 ಮೀಟರ್ ಓಟದ ಸ್ಪರ್ಧೆಗಳಲ್ಲಿ ಫೈನಲ್ ಪ್ರವೇಶಿಸಿ 7ನೇ ಸ್ಥಾನ ಪಡೆದರು.
ಅವರು 4×100 ಮೀಟರ್ ರಿಲೇ ಓಟದ ವಿಭಾಗದಲ್ಲಿ ಭಾರತ ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಈ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.