
ನೈಋತ್ಯ ರೈಲ್ವೆ ವಲಯವು ಅರಸೀಕೆರೆಗೆ ಆಗಮಿಸುವ ಎರಡು ರೈಲುಗಳ ಸಮಯವನ್ನು ಬದಲಾಯಿಸಿದ್ದು, ಪರಿಷ್ಕೃತ ವೇಳಾಪಟ್ಟಿ ಆಗಸ್ಟ್ 10ರಿಂದ ಜಾರಿಗೆ ಬರಲಿದೆ.
ಯಲಹಂಕ - ಅರಸೀಕೆರೆ ಮೆಮು ರೈಲು (66505) ಬೆಳಗ್ಗೆ 11:15ಕ್ಕೆ ಆಗಮಿಸಲಿದ್ದು, ಮೈಸೂರು - ಅರಸೀಕೆರೆ ಪ್ಯಾಸೆಂಜರ್ ರೈಲು (56266) ಬೆಳಗ್ಗೆ 10:15ಕ್ಕೆ ಅರಸೀಕೆರೆ ತಲುಪಲಿದೆ.
ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ಮಂಗಳೂರು ಜಂಕ್ಷನ್ ಮತ್ತು ಯಶವಂತಪುರ ನಡುವೆ 14 ಕೋಚ್‌ಗಳ ವಿಶೇಷ ಎಕ್ಸ್‌ಪ್ರೆಸ್ ರೈಲು (06016) ಸಂಚರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.