
ಮಂಡಿರಜ್ಜು ಗಾಯದ ಕಾರಣದಿಂದಾಗಿ ಭಾರತದ ಸ್ಟಾರ್ ಬ್ಯಾಟರ್ ಜೆಮಿಮಾ ರೊಡ್ರಿಗಸ್ ಇಂಗ್ಲೆಂಡ್ನ 'ದಿ ಹಂಡ್ರೆಡ್' ಲೀಗ್ನಿಂದ ಹೊರಬಿದ್ದಿದ್ದು, ಏಷ್ಯಾಕಪ್ಗೆ ಲಭ್ಯತೆ ಅನುಮಾನವಾಗಿದೆ.
25 ವರ್ಷದ ಜೆಮಿಮಾ ಸದರ್ನ್ ಬ್ರೇವ್ ತಂಡದ ಪರ ಆಡಿದ 6 ಇನ್ನಿಂಗ್ಸ್ಗಳಲ್ಲಿ 35.75 ಸರಾಸರಿಯಲ್ಲಿ 143 ರನ್ ಗಳಿಸಿ ಉತ್ತಮ ಫಾರ್ಮ್ನಲ್ಲಿದ್ದರು.
ಆಗಸ್ಟ್ 30 ರಂದು ಥೈಲ್ಯಾಂಡ್ ವಿರುದ್ಧ ನಡೆಯಲಿರುವ ಏಷ್ಯಾಕಪ್ನ ಮೊದಲ ಪಂದ್ಯಕ್ಕೆ ಜೆಮಿಮಾ ಫಿಟ್ ಆಗುತ್ತಾರೆಯೇ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.